ಬೇಡ ಎಂದು ಬಿಡುತ್ತಿದ್ದ ಕಬ್ಬಿನ ಸೋಗಿಗೆ ಡಿಮ್ಯಾಂಡ್, ರೈತರು ಖುಷ್!

ಚಾಮರಾಜನಗರ (Chamarajanagara) ಹಾಗೂ ಮೈಸೂರು (Mysuru) ಜಿಲ್ಲೆಯ ಹಲವಾರು ಭಾಗಗಳಲ್ಲಿ ಕಬ್ಬಿನ (Sugarcane) ಒಣಗಿದ ಸೋಗುಗಳಿಗೆ ಈಗ ಉತ್ತಮ ಬೆಲೆ ಸಿಗುತ್ತಿದೆ. ಹಿಂದೆ ಹೊಲಗಳಲ್ಲಿ ಬಿದ್ದಿದ್ದ ಈ ಒಣಗಿದ ಕಬ್ಬಿನ ಸೋಗುಗಳನ್ನು ಹೆಚ್ಚಿನವರು ಬಳಸದೇ ಬಿಡುತ್ತಿದ್ದರು. ಆದರೆ ಈಗ ಶುಂಠಿ (Ginger) ಬೆಳೆಗಾರರು ಈ ಸೋಗುಗಳನ್ನು ದೊಡ್ಡ ಪ್ರಮಾಣದಲ್ಲಿ ಖರೀದಿ ಮಾಡುತ್ತಿರುವುದು ರೈತರಿಗೆ ಹೆಚ್ಚುವರಿ ಆದಾಯದ ಮಾರ್ಗವಾಗಿ ಪರಿಣಮಿಸಿದೆ.

ಶುಂಠಿ ಬೆಳೆಗಾರರಿಗೆ ಬೇಕು ಈ ಸೋಗು

ಪ್ರಸ್ತುತ ಒಂದು ಟ್ರಾಕ್ಟರ್ ತುಂಬುವಷ್ಟು ಕಬ್ಬಿನ ಒಣಗಿದ ಸೋಗಿಗೆ ಸುಮಾರು 16,000 ರೂ.ವರೆಗೆ ಬೆಲೆ ಸಿಗುತ್ತಿದೆ. ಶುಂಠಿ ಬೆಳೆ ಬೆಳೆಸುವ ರೈತರು ಶುಂಠಿ ಬೆಳೆ ನೆಡುವ ಪ್ರಾರಂಭದ ಹಂತದಲ್ಲಿ ಈ ಒಣಗಿದ ಸೋಗುಗಳನ್ನು ಬಳಸುತ್ತಾರೆ. ಶುಂಠಿ ಬೆಳೆ ನೆಟ್ಟ ನಂತರ ಹೊಲದ ಮೇಲೆ ಕಬ್ಬಿನ ಸೋಗುಗಳನ್ನು ಹಾಸುವುದರಿಂದ ಮಣ್ಣಿನ ತೇವಾಂಶ ಉಳಿಯುತ್ತದೆ.

ಜೊತೆಗೆ ಬೇಸಿಗೆಯ ತಾಪದಿಂದ ಗಿಡಗಳು ರಕ್ಷಣೆ ಪಡೆಯುತ್ತವೆ ಹಾಗೂ ಗಿಡಗಳ ಬೆಳವಣಿಗೆಗೂ ಸಹಾಯವಾಗುತ್ತದೆ.

Leave a Reply

Your email address will not be published. Required fields are marked *

error: Content is protected !!