ಶುದ್ದ ಜಲ ಎಲ್ಲರಿಗೂ ದೊರಕಬೇಕು : ಸಾಹಿತಿ ಮಲನ ಮೂರ್ತಿ

ಮಧುಗಿರಿ : ಶುದ್ದ ಜಲ ದೊರಕದ ಕಾರಣ ಚಿಕ್ಕ ಮಕ್ಕಳು ಹಾಗೂ ವಯೋವೃದ್ದರು ಹಲವಾರು ರೋಗಗಳಿಗೆ ತುತ್ತಾಗುತ್ತಿರುವುದು ವಿಷಾಧನೀಯ ಎಂದು ಸಾಹಿತಿ ಮಲನ ಮೂರ್ತಿ ತಿಳಿಸಿದರು.

ಪಟ್ಟಣದ ಪಶು ಇಲಾಖೆಯ ಆವರಣದಲ್ಲಿರುವ ನಂದಿನಿ ಕ್ಷೀರ ಮಳಿಗೆಯಲ್ಲಿ ಅಚಲ ಫೌಂಡೇಶನ್ ವತಿಯಿಂದ ಲೇಖಕ ಎ.ಕೆ.ರಾಮಾನುಜನ್ ಜಯಂತಿ ಹಾಗೂ ವಿಶ್ವಜಲ ದಿನಾಚರಣೆಯನ್ನು ಆಚರಿಸಿ ಮಾತನಾಡಿದ ಅವರು, ಎಲ್ಲರಿಗೂ ಶುದ್ದ ನೀರು ದೊರಕುವ ಕೆಲಸ – ಕಾರ್ಯಗಳು ಆಗಬೇಕಿದೆ. ಶುದ್ಧ ನೀರು ದೊರಕಿದರೆ ರೋಗ – ರುಜುನಿಗಳು ದೂರವಾಗಿ , ಮನುಷ್ಯನ ಆರೋಗ್ಯ ವೃದ್ದಿಯಾಗುತ್ತದೆ ಎಂದರು. ಜಲದ ಬಗ್ಗೆ ಜನ ಜಾಗೃತಿ ಮೂಡಿಸಲು ಇಂತಹ ಕಾರ್ಯಗಳು ಅವಶ್ಯಕವಾಗಿದೆ ಎಂದರು.

ಅಚಲ ಫೌಂಡೇಷನ್ ಅಧ್ಯಕ್ಷ ಪ್ರೊ.ಮುನೀಂದ್ರ ಕುಮಾರ್, ನೀರು ಇಲ್ಲದೇ ಯಾರು ಬದುಕಲು ಸಾಧ್ಯವಿಲ್ಲ. ಆದರೆ ಕೆಲ ಕೈಗಾರಿಕೆಗಳಿಂದ ನೀರು ಕಲುಷಿತವಾಗಿ ರೋಗ – ರುಜುನಿಗಳು ಹೆಚ್ಚಾಗುತ್ತಿವೆ. ಕೈಗಾರಿಕೆಗಳ ಕಲುಷಿತ ನೀರು ಬೆಂಗಳೂರಿನ ವೃಷಭ ನದಿಗೆ ಸೇರುತ್ತಿರುವುದು ವಿಷಧಾನೀಯ ಎಂದರು.

ಲೇಖಕ ಎ.ಕೆ.ರಾಮಾನುಜನ್ ಅವರು, ದಕ್ಷಿಣ ಭಾರತದ ಭಾಷ್ಯ ಪ್ರವೀಣರು. ಸಂಸ್ಕೃತವನ್ನು ಅಧ್ಯಯನ ಮಾಡಿ ಕರಗತ ಮಾಡಿಕೊಂಡಿದ್ದರು. ವಿದೇಶದವರಿಗೆ ಭಾರತೀಯ ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪರಿಚಯ ಮಾಡಿಕೊಟ್ಟ ಎ.ಕೆ.ರಾಮಾನುಜನ್ ಅವರು ಸೃಜನ ಶೀಲ ಲೇಖಕರಾಗಿದ್ದರು ಎಂದರು.

ಕಾರ್ಯಕ್ರಮದಲ್ಲಿ ಪುರವರ ಹೋಬಳಿ ಕಸಾಪ ಅಧ್ಯಕ್ಷ ಪಿ.ಕೆ.ರಂಗಸ್ವಾಮಿ , ಡಿಸಿಸಿ ಬ್ಯಾಂಕ್ ನಿವೃತ್ತ ಮೇಲ್ವಿಚಾರಕ ನರಸಿಂಹಮೂರ್ತಿ, ಶಿಕ್ಷಕ ರಘು ಗಂಕಾರನಹಳ್ಳಿ , ಪತ್ರಕರ್ತ ಲಕ್ಷ್ಮೀಪತಿ, ಪ್ರಕಾಶ್ ಇದ್ದರು.

Leave a Reply

Your email address will not be published. Required fields are marked *

error: Content is protected !!