ಪೇಜಾವರ ಮಠ ಕೃಷ್ಣ ಮಂದಿರ ಸ್ಥಳದ ಈ ಸ್ವತ್ತು ಖಾತೆಯನ್ನು ರಾಜೇಂದ್ರ ರಾಜಣ್ಣ ವಿತರಿಸಿದರು

Star 6 news

ಮಧುಗಿರಿ : ಪಟ್ಟಣದಲ್ಲಿ ಶ್ರೀ ಕೃಷ್ಣ ದೇವಾಲಯವನ್ನು ನಿರ್ಮಾಣ ಮಾಡುವಾಗ ವೆಂಕಟರಮಣ ಹಾಗೂ ಮಲ್ಲೇಶ್ವರ ಸ್ವಾಮಿ ದೇವಾಲಯವನ್ನು ಅಭಿವೃದ್ಧಿ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ  ರಾಜೇಂದ್ರ ರಾಜಣ್ಣ ತಿಳಿಸಿದರು. 

ಪಟ್ಟಣದ ವಿಪ್ರ ಸೇವಾ ಟ್ರಸ್ಟ್ ಕಟ್ಟಡದಲ್ಲಿ ಪೇಜಾವರ ಮಠ ಕೃಷ್ಣ ಮಂದಿರ ಸ್ಥಳದ ಈ ಸ್ವತ್ತು ಖಾತಾ ವನ್ನು ತಾಲ್ಲೂಕು ಬ್ರಾಹ್ಮಣ ಸಭಾ ಪದಾಧಿಕಾರಿಗಳಿಗೆ ಹಸ್ತಾಂತರಿಸಿ ಮಾತನಾಡಿದ ಅವರು, ಶಾಸಕ  ಕೆ. ಎನ್. ರಾಜಣ್ಣ ಅವರು ತಮ್ಮ ಅಧಿಕಾರ ಅವಧಿಯಲ್ಲಿ ವಿಪ್ರ ಸಮುದಾಯಕ್ಕೂ ರಾಜಕೀಯ ಅಧಿಕಾರ ನೀಡಿದ್ದಾರೆ. ಕ್ಷೇತ್ರದ ಎಲ್ಲಾ ಸಮುದಾಯಗಳ ಸರ್ವತೋಮುಖ ಅಭಿವೃದ್ಧಿಗೆ ಶಾಸಕರು ಅನುದಾನವನ್ನು ನೀಡುತ್ತಿದ್ದಾರೆ ಎಂದರು.

ಮುಂದಿನ ದಿನಗಳಲ್ಲಿ ಇಡೀ ಜಿಲ್ಲೆಯ ಜನತೆ ಮಧುಗಿರಿಯತ್ತ ನೋಡುವಂತೆ ಅಭಿವೃದ್ಧಿಪಡಿಸಲಾಗುತ್ತಿದೆ ಎಂದರು.ಪಟ್ಟಣದಲ್ಲಿರುವ ಶಂಕರ ಮಠಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿಕೊಡಲು ಅಧಿಕಾರಿಗಳಿಗೆ ಸೂಚಿಸುವಾಗಿ ತಿಳಿಸಿದರು. ಬ್ರಾಹ್ಮಣ ಸಮುದಾಯದ ಬಹಳ ವರ್ಷಗಳ ಬೇಡಿಕೆ ಈ ದಿನ ಈಡೇರಿದ್ದು, ನಿಮ್ಮಿಂದ ಸಮಾಜಕ್ಕೆ ಅನುಕೂಲವಾಗಲಿ ಎಂದರು.  

ತಾಲ್ಲೂಕು ಬ್ರಾಹ್ಮಣ ಸಭಾ ಅಧ್ಯಕ್ಷ  ಪಿ. ದತ್ತಾತ್ರೇಯ ಮಾತನಾಡಿ, ತಾಲೂಕು ಬ್ರಾಹ್ಮಣ ಸಭಾ ಕಾರ್ಯ ಚಟುವಟಿಕೆಗಳಿಗೆ ಅನುಕೂಲ ವಾಗುವಂತೆ ಸಮುದಾಯ ಭವನ ನಿರ್ಮಿಸಲು  2 ಎಕರೆ ಜಾಗ ಕೊಡಿಸುವಂತೆ ಮನವಿ ಮಾಡಿದರು.  

ಪುರಸಭೆ ಮಾಜಿ ಅಧ್ಯಕ್ಷರಾದ ಎಂ. ಕೆ. ನಂಜುಂಡಯ್ಯ, ಲಾಲಾಪೇಟೆ ಮಂಜುನಾಥ್, ಮಾಜಿ ಸದಸ್ಯ ಕೆ. ನಾರಾಯಣ ,ಬ್ರಾಹ್ಮಣ ಸಭಾ ಪದಾಧಿಕಾರಿಗಳಾದ  ಕೆ. ನಾಗರಾಜ ಶಾಸ್ತ್ರಿ, ಚಿ.ಸೂ.ಕೃಷ್ಣಮೂರ್ತಿ ,ಎಸ್. ಎ. ಶ್ಯಾಮನಾಥ್, ಶ್ರೀ ಶಂಕರ ಸೇವಾ ಸಮಿತಿ ಅಧ್ಯಕ್ಷ  ಬಿ. ಆರ್. ಸತ್ಯನಾರಾಯಣ, ಎಸ್. ವಿ. ಸೂರ್ಯನಾರಾಯಣ್ ರಾವ್ ಇದ್ದರು.

Leave a Reply

Your email address will not be published. Required fields are marked *

error: Content is protected !!